Sirsi karnataka

Kannada is the main language of Sirsi karnataka facebook group. It is a CLOSED group. Sirsi karnataka has 3,512 members. So people rank it like a Medium group. 208869465804214 is the identifier of this group with Facebook. We last updated on 2015-02-09 09:49:16.

ಶಿರಸಿ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಾಗವು ಪ್ರಶಾ೦ತ ಪರಿಸರ ಹಾಗೂ ಹಚ್ಚ ಹಸಿರಾದ ಕಾಡುಗಳಿಗೆ ಹೆಸರುವಾಸಿ. ಈ ಊರಿನಲ್ಲಿ ಅತಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಸಹ ಇದೆ.ಶ್ರಿ ಮಾರಿಕಾಂಬೆಯ ಜಾತ್ರೆ ಎರಡು ವರ್ಷಕ್ಕೊಮ್ಮೆ ಎ೦ಟು ದಿನಗಳ ಕಾಲ ನಡೆಯುತ್ತದೆ. ಈಊರಿನಸನಿಹಇರುವ ಕೆಲವು ರಮಣೀಯ ಸ್ಥಳಗಳು ಯಾಣ, ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜಮಠ), ಸಹಸ್ರಲಿ೦ಗ,ಇದು ಕಾಡಿನಿ೦ದ ಆವರಿಸಲ್ಪಟ್ಟಿದೆ. ಇಲ್ಲಿಯ ಸುತ್ತ ಮುತ್ತ ಹಳ್ಳಿಗಳ ಜನ ಅಡಿಕೆ ಬೆಳೆಗಾರರು. ತೆ೦ಗು, ಭತ್ತ, ವೆನಿಲ್ಲಾ, ಕೋಕಾಗಳನ್ನೂಸಹಇಲ್ಲಿಬೆಳೆಯುತ್ತಾರೆ.ಶಿರಸಿಯ ಮಾರಿಕಾಂಬಾದೇಗುಲವುಬಹಳ ಪ್ರಸಿದ್ಧಿಯಾಗಿದೆ. ೨೦೦೧ರ ಜನಗಣತಿಯ ಪ್ರಕಾರಈ ಊರಿನ ಜನಸಂಖ್ಯೆ೫೮,೭೧೧. ಇವರಲ್ಲಿ೭೯ ಶೇಕಡಾಜನರುವಿದ್ಯಾವಂತರು. ಇವರುಕನ್ನಡ(ಹವ್ಯಕಕನ್ನಡ, ಕೊಂಕಣಿ, ಉರ್ದು, ಮರಾಠಿ ಮಾತಡುತ್ತಾರೆ. ಇಲ್ಲಿಯಜನ ಬಹಳ ಸೌಹಾರ್ದಶೀಲರು.ಸಿರಸಿ ಸಮುದ್ರಮಟ್ಟದಿಂದ೫೯೦ ಮೀಟರ್ಎತ್ತರದಲ್ಲಿಸಹ್ಯಾದ್ರಿಪರ್ವತಶ್ರೇಣಿಯ ಮಧ್ಯದಲ್ಲಿದೆ. ಇದುಕರ್ನಾಟಕದರಾಜಧಾನಿಬೆಂಗಳೂರಿನಿಂದ ೪೨೫ಕಿ.ಮಿ. ದೂರದಲ್ಲಿದೆ.
ಶಿರಸಿಯ ಸುತ್ತ ಮುತ್ತಪ್ರೇಕ್ಷಣೀಯಸ್ಥಳಗಳು
ಬನವಾಸಿ> ಕ್ರಿಸ್ತಶಕ೩೪೫ – ೫೨೫ ವರೆಗೆಆಳಿದಕದಂಬಅರಸರರಾಜಧಾನಿಯಾಗಿದ್ದ ಬನವಾಸಿ ಸಿರಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬಸುಂದರವಾಗಿದೆ.
ಸಹಸ್ರಲಿಂಗ ಸಿರಸಿಯಿಂದ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆಶಿವರಾತ್ರಿಯಂದು ಬಹಳ ಜನ ಬರುತ್ತಾರೆ.
ಸೊಂದಾ ಸಿರಸಿಯಿಂದ ೧೫ ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ ಪ್ರಸಿದ್ಧ ವಾದಿರಾಜ ಮಠವಿದೆ.
ಉಂಚಳ್ಳಿ ಜಲಪಾತ ೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರಸಿಯಿಂದ ೩೦ ಕಿ.ಮಿದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ.