KARAAVALI KARNATAKA

KARAAVALI KARNATAKA is a Kannada group. Having alot of group type in Facebook: close, open and secret and it is a CLOSED group. They attracted 6,563 members. So people rank it like a Large group. You can find this group by searching 402634216498669 on Google, Bing or Yahoo. Last update is on 2015-02-09 09:45:06.

ಭವ್ಯ ಭಾರತ ದೇಶದ ಕರ್ನಾಟಕ ರಾಜ್ಯದ ಕಡಲಕಿನಾರೆಯ ನಯನ ಮನೋಹರ ನಿಸರ್ಗದ ಸೌಂದರ್ಯದ ನಾಡು, ಪರಶುರಾಮನ ಸ್ರಷ್ಠಿಯ ಸೊಬಗಿನಲ್ಲಿ ಕಂಗೊಳಿಸುತ್ತಿರುವುದು ಕರ್ನಾಟಕದ ಕರಾವಳಿ. ಕಾಸರಗೋಡಿನಿಂದ ಕಾರವಾರದವರೆಗೆ ವರ್ಣಮಯ ಚಿತ್ತಾರದಲ್ಲಿ ಕಂಗೊಳಿಸುವ ತೆಂಗು ಕಂಗಿನ ತೋಟಗಳು, ಹಸಿರುಹಾಸಿನ ಭತ್ತದ ಗದ್ದೆಗಳು, ನಿತ್ಯಹರಿದ್ವರ್ಣ್ದದ ಕಾನನ ಶ್ರೇಣಿ, ಕೆರೆ, ಕಾಲುವೆ, ನದಿಗಳು, ಜಲಪಾತಗಳ ಜುಳು ಜುಳು ಸದ್ದು, ನೂರಾರು ಕಿಲೋಮೀಟರ್ ಉದ್ದದ ಭೋರ್ಗರೆಯುವ ಅರಬ್ಬೀ ಕಡಲ ಬದಿಯಲ್ಲಿ ಭೂದೇವಿ ತನ್ನ ತೆಕ್ಕೆಯಲ್ಲಿ ವೈವಿದ್ಯಮಯ ಶ್ರೀಮ0ತ ಸಂಸ್ಕೃತಿಗೆ ಆಶ್ರಯ ನೀಡಿದ್ದಾಳೆ.

ಕರ್ನಾಟಕದ ಪಂಚ ಭಾಷೆಗಳಾದ ಕನ್ನಡ, ತುಳು, ಕೊ0ಕಣಿ , ಕೊಡವ ಮತ್ತು ಬ್ಯಾರಿ ಭಾಷೆಗಳನ್ನು ಪಡೆದ ಪ್ರದೇಶವಿದಾಗಿದೆ. ಕಡಲತಡಿಯಲ್ಲಿ ನೆಲೆಸಿರುವ ಕನ್ನಡ, ತುಳು ಭಾಷಿಗರು ಇನ್ನಿತರರ ನಡುವೆ ಸೌಹಾರ್ದತೆಯ್ಯಿಂದ ಪರಂಪರಾಗತ ನೆಲೆಗಟ್ಟಿನಲ್ಲಿ ಸಾಂಪ್ರದಾಯಿಕ ಜೀವನ ಶೈಲಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕರಾವಳಿಯ ಉದ್ದಗಲಕ್ಕೂ ಸಾಮಾಜಿಕ ಸೌಹಾರ್ದತೆಯ ಪ್ರತೀಕವಾಗಿ ತಲೆ ಎತ್ತಿ ನಿಂತಿರುವ ದೇವಸ್ತಾನಗಳು, ಇಗರ್ಜಿ, ಮಸೀದಿ, ದೈವ, ಭೂತಾಸ್ತಾನ, ಗರಡಿಗಳು ಹಲವಾರು ಶತಮಾನಗಳಿಂದ ಸರ್ವಧರ್ಮೀಯರ ಶಾಂತಿ ಮಂತ್ರದೊಂದಿಗೆ ನೆಲೆ ನಿಂತಿದೆ. ಯಕ್ಷಗಾನದ ಚಂಡೆ ನಾದ, ಪಾಡ್ದನ, ಕೋಲ, ಕಂಬಳ, ನಾಗಮಂಡಲ, ನೇಮ, ಜಾತ್ರೆ, ಡಕ್ಕೆಬಲಿ ಇದು ಕರಾವಳಿಯ ನೈಜ ಚಿತ್ರಣ . ಹೊಸ ಆವಿಷ್ಕಾರಗಳನ್ನು ನವ್ಯ ಪರಂಪರೆ ಅಳವಡಿಸಿಕೊಂಡು ಬಂದಿದ್ದರೂ ತನ್ನ ಪರಂಪರೆಯ ಆದರ್ಶ ಚೌಕಟ್ಟನ್ನು ಮೀರದಿರುವುದು ಕರಾವಳಿ ಕರ್ನಾಟಕದ ವೈಶಿಸ್ಟ್ಯವಾಗಿದೆ.

ಇಂತ ಭವ್ಯ ಕರ್ನಾಟಕದ ಕರಾವಳಿಯ ಪುಟಕ್ಕೆ ತಮ್ಮೆಲ್ಲರಿಗೂ ಹ್ರದಾಯಾಳದಿಂದ ಸ್ವಾಗತ...

-ADMIN